ORDER ONLINE AND PAY BY CREDIT/DEBIT CARD/NETBANKING OR COD/PAY ON DELIVERY - COD CHARGES Rs.60/- EXTRA. AVAILABLE FOR SELECT PIN CODES ONLY. YOU CAN SAVE COD CHARGES BY PAYING THROUGH CREDIT/DEBIT/NET BANKING .FREE SHIPPING ON ORDERS ABOVE RS 549/-. *(T &C apply)
APRATIMA KODUGE
Mastermind Books
ಅಪ್ರತಿಮ ಕೊಡುಗೆ
(ಜೆಮ್ ಸ್ಟೋವಲ್ನ ‘ದಿ ಅಲ್ಟಿಮೇಟ್ ಗಿಫ್ಟ್’ ಕೃತಿಯಿಂದ ಪ್ರೇರಿತ)
"ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯಲು ಏನೆಲ್ಲಾ ಮಾಡಬೇಕು? ಬೆಲೆ ಕಟ್ಟಲಾಗದ ಪಿತ್ರಾರ್ಜಿತ ಆಸ್ತಿಯನ್ನು ದಕ್ಕಿಸಿಕೊಳ್ಳಲು ವಿಕ್ರಮ್ ನಗರ್ಕರ್ ಮಾಡಿದ ಸರ್ಕಸ್ ಫಲ ಕೊಟ್ಟಿತೇ!! ಈ ಪಯಣದಲ್ಲಿ ಭಾಗಿಯಾಗುವುದೇ ಒಂದು ರೋಮಾಂಚಕಾರಿ ಅನುಭವ......."
ಈ ಪುಸ್ತಕದ ಕಥೆಯಲ್ಲಿ ಬರುವ ವಿಕ್ರಮ್ ನಗರ್ಕರ್ ಓರ್ವ ಹುಂಬ, ಒರಟ ಮತ್ತು ಬೇಜವಾಬ್ದಾರಿಯ ವ್ಯಕ್ತಿ. ತನಗೆ ದಕ್ಕಬೇಕಾದ್ದು ತಾನಾಗಿಯೇ ಬರುತ್ತದೆ. ಅದಕ್ಕೆ ತಾನೇಕೆ ಮೈ ಬಗ್ಗಿಸಿ ಬೆವರು ಸುರಿಸಬೇಕು? ಎಂಬ ಧೋರಣೆಯುಳ್ಳವ. ಆದರೆ ಎಲ್ಲವೂ ನಾವಂದುಕೊಂಡಂತೆಯೇ ನಡೆದುಬಿಟ್ಟರೆ ನಮ್ಮನ್ನು ಹಿಡಿಯುವವರು ಯಾರು? ‘ಹಕ್ಕು’ ಸಾಧಿಸುವುದಕ್ಕೆ ಮುಂಚಿತವಾಗಿ ‘ಕರ್ತವ್ಯ’ವನ್ನು ಮಾಡಪ್ಪಾ ಎಂದು ‘ಸಂದರ್ಭ’ವು ಪಟ್ಟುಹಿಡಿದು ಕೂತಿದ್ದಕ್ಕೆ, ಆತ ತನ್ನ ಭ್ರಮೆಯ ಪೊರೆಯನ್ನು ಒಂದೊಂದಾಗಿಯೇ ಕಳಚಬೇಕಾಗುತ್ತದೆ. ಎಲ್ಲಾ ಕಲ್ಮಶಗಳನ್ನೂ ತೊಡೆದುಕೊಂಡು ಅಪ್ಪಟ ಚಿನ್ನವಾಗುವ ಹಂತ ಬಂದಾಗ ವಿಕ್ರಮ್ನ ವ್ಯಕ್ತಿತ್ವವೇ ಬದಲಾಗಿರುತ್ತದೆ. ಅದು ಹೇಗೆ? ಎಂಬುದನ್ನು ಕಂಡುಕೊಳ್ಳಲು ನೀವು ಈ ‘ಅಪ್ರತಿಮ ಕೊಡುಗೆ’ಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲೇಬೇಕು.
Book Attributes | |
Pages | 188 |
PB/HB | PB |
Publisher | ವಾಸನ್ ಪಬ್ಲಿಕೇಷನ್ಸ್ |
In Stock
Warning: Last items in stock!
Availability date:
3-4 Days
Rs. 85 tax incl.